Janathe.com is kannada news, karnataka news, latest kannada news, mangalore

Janathe.com (Kannada: ಜನತೆ.ಕಾಂ)

ಮಾಧ್ಯಮಗಳು ಜನರ ನಾಡಿ ಮಿಡಿತ. ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜತೆಗೆ ಮಾಧ್ಯಮಗಳೂ ಕೂಡಾ ಅಷ್ಟೇ ವೇಗದಲ್ಲಿ ಬೇಳೆಯುತ್ತಿದೆ. ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಸರಳವಾಗಿ ಮತ್ತು ತಕ್ಷಣ ನೀಡುವ ಮಧ್ಯಮದ ಕಡೆಗೆ ಜನ ಆಕರ್ಷಿತರಾಗುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಕ್ಷೇತ್ರಕ್ಕೆ ಮಾತ್ರ ಇದನ್ನು ಕೇಂದ್ರೀಕರಿಸಿದರೆ ಮತ್ತೆ ನಮ್ಮ ಮುಂದೆ ಹಲವಾರು ಆಯಾಮಗಳು ತೆರೆದುಕೊಳ್ಳುತ್ತವೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲಾ ಸುದ್ದಿ, ಮಾಹಿತಿಗಳನ್ನು ಎಲ್ಲರೂ ಸ್ವೀಕರಿಸುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿರುವಾಗಲೇ ತ್ವರಿತಗತಿಯ ಜೀವನ ಶೈಲಿಯಲ್ಲಿ ಪತ್ರಿಕೆ ಓದಲು ಸಮಯ ಕಂಡು ಕೊಳ್ಳುವುದು ಕೂಡಾ ದುಸ್ತರದ ವಿಚಾರವೇ ಹೌದು. ಆ ನಿಟ್ಟಿನಲ್ಲಿ ಅಂತರ್ಜಾಲ ತಾಣಗಳ ವರದಿಗಳು, ಮಾಹಿತಿಗಳು ಹೆಚ್ಚು ಮಹತ್ವವನ್ನು ಪಡೆದಿದೆ.ಆದುದರಿಂದ ಇಂದು ವಾರ್ತಾತಾಣಗಳ ಸಂಖ್ಯೆ ಅತೀ ಹೆಚ್ಚಾಗಿದೆ. ಆದರೆ ಇವುಗಳೂ ಕೂಡಾ ಯಾವ ರೀತಿಯ ವಾರ್ತೆಗಳನ್ನು ತನ್ನ ಪರಿಮಿತಿಯ ಓದುಗರಿಗೆ ನೀಡಬೇಕು ಎಂಬುದು ಜಿಜ್ಞಾಸೆಯ ವಿಷಯವೇ ಸರಿ. ಇಲ್ಲಿಯೂ ಆಯ್ಕೆ ಎನ್ನುವುದು ಮಾನದಂಡವಾಗಬೇಕು. ಈ ಚಿಂತನೆಯಲ್ಲಿ ಹುಟ್ಟಿಕೊಂಡ ಒಂದು ನೂತನ ಯೋಚನೆಯೇ ಸನಾಗರಿಕ ಪತ್ರಿಕೋದ್ಯಮ(www.janathe.com publishes kannada latest news updates, karnataka news, bangalore news, mangalore news, mysore news, hubli news, kasaragod news, regional kannada news)

Languages

Kannada

Additional Information

ಯಾವುದೇ ಓದುಗ ಸುದ್ದಿ ಅಥವಾ ಮಾಹಿತಿಯನ್ನು ಓದುವಾಗ ಅವನು ಅನಗತ್ಯವಾಗಿ ಯಾವುದೇ ಉದ್ವೇಗಕ್ಕೆ ಒಳಗಾಗಬಾರದು ಮತ್ತು ಅವನ ಮನಸ್ಸಿನಲ್ಲಿ ವಿಕೃತ ಭಾವನೆಗಳು ಸ್ಪೋಟಗೊಳ್ಳಬಾರದು ಎಂಬ ಯೋಚನೆಯಲ್ಲಿ ಈ ಹೊಸ ಕಲ್ಪನೆಯನ್ನು ಮಾಡಲಾಗಿದೆ. ವಿಶ್ವದಲ್ಲಿಯೇ ಇದು ಮೊತ್ತ ಮೊದಲ ಚಿಂತನೆಯಾಗಿದೆ ಎನ್ನುವುದು ನಮ್ಮ ಪ್ರಯತ್ನ ಮತ್ತು ಶ್ರಮಕ್ಕೆ ಸಾರ್ಥಕ್ಯ. ಇದು ಸುದ್ದಿಯ ಪ್ರಕಟಣೆಗೆ ಒಂದು ಮಿತಿಯನ್ನು ನೀಡುವುದಿದ್ದರೂ, ಯಾವುದೋ ಒಂದು ಸಾದ್ಯತೆ ಯನ್ನು ಈ ಮೂಲಕ ಸಾಧಿಸಬಹುದೆಂದು ನಾವು ತಿಳಿದುಕೊಂಡಿದ್ದೇವೆ.

ಜನತೆ.ಕಾಂ ಯಾವುದೇ ಓದುಗನಿಗೆ ಅಗತ್ಯವಾದ ಸಕರಾತ್ಮಕ ವರದಿಗಳನ್ನು ಮತ್ತು ಮಾಹಿಗಳನ್ನು ಮಾತ್ರ ಪ್ರಕಟಿಸುತ್ತದೆ. ಸ್ಥಳಿಯವಾಗಿರುವ ವರದಿಗಳು, ಸಾಧನೆಗಳು, ವ್ಯಕಿತ್ವ ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಸ್ಥಾನ ಪಡೆಯಬೇಕಿದೆ.

ಈ ಮನಸ್ಸಿನ ವರದಿಗಳನ್ನು ಓದುಗರು ಕೂಡಾ ಜನತೆ.ಕಾಂಗೆ ಕಳುಹಿಸಲು ಮುಕ್ತ ಅವಕಾಶಗಳಿದ್ದು ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಲಾಗುವುದು. ಆದುದರಿಂದ ಅದು ನಾಗರಿಕ ಪತ್ರಿಕೋದ್ಯಮವೂ ಆಗುತ್ತದೆ. ಈ ಎಲ್ಲಾ ಒಟ್ಟು ಚಿಂತನೆಗೆ ಸನಾಗರಿಕ ಪತ್ರಿಕೋದ್ಯಮ ಎಂದು ಹೆಸರಿಸಲಾಗಿದ್ದು, ಅದರ ಸಂಪೂರ್ಣ ಪ್ರಯೋಜನಗಳನ್ನು ನಾಗರಿಕರು ಯಾ ಓದುಗರು ಬಳಸಿಕೊಳ್ಳುತ್ತಾರೆ ಎಂಬುವುದು ನಮ್ಮ ಆಶಯ.

Related Domains

External Links



Retrieved from "http://aboutus.com/index.php?title=Janathe.com&oldid=31932438"